ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವೈಶಿಷ್ಟ್ಯವಾಗಿರುವುದು

ರಾಜ್ಯಮಟ್ಟದ ಕಥನ ಕಾವ್ಯ ಸ್ಪರ್ಧೆಗೆ ​​​​​​​ಅರ್ಜಿ ಆಹ್ವಾನ

  ಕೃಷ್ಣಾಪುರದೊಡ್ಡಿ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ನಿಂದ ರಾಜ್ಯಮಟ್ಟದ ಕಥನ ಕಾವ್ಯ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 10,000, ಎರಡನೇ ಬಹುಮಾನ 5,000, ಮೂರನೇ ಬಹುಮಾನ 3,000 ಉಳಿದಂತೆ ತಲಾ 1,000 ದಂತೆ ಐದು ಸಮಾಧಾನಕರ ಬಹುಮಾನ ಹಾಗೂ ಪಾಲ್ಗೊಂಡ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು 2023 ಸೆಪ್ಟೆಂಬರ್ 30ನೇ ಶನಿವಾರ ಕೊನೆಯ ದಿನಾಂಕವಾಗಿದೆ. ಸ್ಪರ್ಧೆಯ ನಿಯಮಗಳು: ವೃತ್ತಿಗಾಯಕ ತಂಡಗಳಿಗೆ ಆದ್ಯತೆ ನೀಡಲಾಗುವುದು. ತಂಡದಲ್ಲಿ ಕನಿಷ್ಠ ಮೂರು ಮಂದಿ ಇರಲೇಬೇಕು. ಪಾರಂಪರಿಕ ವಾದ್ಯಪರಿಕರಗಳು ಅಂದರೆ ತಂಬೂರಿ, ತಾಳ, ದುಡಿ, ಗಣೆ, ಕಂಸಾಳೆ, ಕಂಜರ, ಗಗ್ಗರ ಇತ್ಯಾದಿಗಳನ್ನೇ ಬಳಸಬೇಕು. ಉತ್ತರ ಕರ್ನಾಟಕ, ಕರಾವಳಿ, ಬಯಲುಸೀಮೆ ಹೀಗೆ ಆಯಾ ಪ್ರಾದೇಶಿಕ, ಜನಪದ ಮಹಾಕಾವ್ಯ, ಕಥನಕಾವ್ಯಗಳ ಭಾಗಗಳನ್ನು ಪ್ರದರ್ಶಿಸಬೇಕು. ಪ್ರತೀ ತಂಡ ಕನಿಷ್ಠ ಅರ್ಧ ಗಂಟೆ ತಮ್ಮ ಕಲೆಯನ್ನು ಪ್ರದರ್ಶಿಸುವಂತಿರಬೇಕು. ಹೆಚ್ಚಿನ ವಿವರಗಳಿಗಾಗಿ :  ಡಾ. ಎಂ. ಬೈರೇಗೌಡ, ಕಾರ್ಯದರ್ಶಿ ಕೆ.ಎಸ್.ಎಂ. ಟ್ರಸ್ಟ್, 7899 906116, ಚಂದ್ರಮೌಳಿ ಕೆ.ಪಿ. ಸ್ಪರ್ಶ ಸ್ಟುಡಿಯೋಸ್, ಕುಣಿಗಲ್, 9844 080983, ನವೀನ್ ಭೂಮಿ ತಿಪಟೂರು, 9019 591927

ಇತ್ತೀಚಿನ ಪೋಸ್ಟ್‌ಗಳು

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2021 ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ

8 Kannada books that trended in 2021 | ಕನ್ನಡ ಪುಸ್ತಕಗಳು 2021

ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಕವನಗಳ ಆಹ್ವಾನ (ಕೊನೆಯ ದಿನಾಂಕ: ೧೫.೦೩.೨೦೨೨)

ಎ. ಎಸ್. ಮಕಾನದಾರರ ಹೊಸ ಗಜಲ್

ಛಂದ ಪುಸ್ತಕದಿಂದ ಹಸ್ತಪ್ರತಿ ಆಹ್ವಾನ

ಬದುಕಿನ ಪಯಣ ಮುಗಿಸಿದ ಈ ನಾಡಿನ ಹೆಮ್ಮೆಯ ಲೇಖಕಿ, ಕಾದಂಬರಿಕಾರ್ತಿ- ಡಾ.ಗೀತಾ ನಾಗಭೂಷಣ್

ಪುಸ್ತಕ ಬಿಡುಗಡೆ - ಗರೀಬನ ಜೋಳಿಗೆ

ಪುಸ್ತಕದ ಮಾತು - "ಗರೀಬನ ಜೋಳಿಗೆ"

ಪುಸ್ತಕದ ಮಾತು - ಕಂದಿಲು ಕಾದಂಬರಿ

ಹೊಸ ಪುಸ್ತಕ ಸೇಪ೯ಡೆ - ಗರಿಬನ ಜೋಳಿಗೆ