ಪುಸ್ತಕದ ಮಾತು - "ಗರೀಬನ ಜೋಳಿಗೆ"



ಮಂದಿರ ಮಸೀದಿಗಳ ಮುರಿದು ಗಹಗಹಿಸಿದರೂ ಇನ್ಸಾನ್ ಎರೆಡು ಮನಸುಗಳ ನಡುವೆ ಉಸಿರಾಡುತ್ತಿದೆ ಮೊಹಬ್ಬತ್.

ನೂರಾರು ಕಥಾ ವಸ್ತುವಿನ ಶೇರ್‍ಗಳ ಸಂಗಮ ನಾಗೇಶ್ ನಾಯಕರ "ಗರೀಬನ ಜೋಳಿಗೆ" ಗಜಲ್ ಸಂಕಲನ ಎಂದು ಹೇಳಲು ಕುಷಿಯಾಗುತ್ತಿದೆ. ಎಕೆಂದರೆ ಪ್ರೇಮ ಧರ್ಮದ ಹೆದ್ದಾರಿ ದಾಟಿ ಹೋಗಬೇಕು. ಅಲ್ಲಿ ಮನುಷ್ಯತ್ವ ಗಟ್ಟಿಗೊಳ್ಳಬೆಕೆಂದರೇ ಗಜಲ್ ಶೇರುಗಳಲ್ಲಿ ಆ ಪ್ರಕಾರದ ತಾಕತ್ತಿರಬೇಕು. ಅದು ಕನ್ನಡ ಭಾಷೆಯ ಗಜಲ್ ಒಳಗೆ ಉರ್ದು ಭಾಷೆಯ ಶಬ್ದಗಳನ್ನು ಕನ್ನಡವನ್ನಾಗಿ ಮಾಡುವುದು ಕೂಡ ಅದೊಂದು ಕಾವ್ಯ ಕಲೆ. ಆ ಕಲೆಯನ್ನು ನಾಯಕರು ಸುಂದರವಾಗಿ ಬಳಸಿಕೊಂಡಿದ್ದಾರೆ.

ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ
https://imojo.in/2xddyse
ಸಾಕಷ್ಟು ಸರಳತೆಯ ಭಾವನೆಗಳನ್ನು ಗeಲ್ ಮಾಡಿರುವ ನಾಗೇಶ್ ನಾಯಕ್‍ರವರು ಬದುಕಿನ ಅನುಭವದ ಜೊತೆಜೊತೆಯಲ್ಲಿ ಲೋಕದ ಅನುಭಾವಗಳನ್ನು ತಳಕು ಹಾಕಿಕೊಂಡು ಕಾವ್ಯ ಕಟ್ಟುವ ದಾಟಿ ತುಂಬಾ ಇಷ್ಟವಾಗುತ್ತದೆ. ಹಾಗೆ ಅವರ ಸರಳತೆ ಹಾಗೂ ಮಾನವಿಯತೆ, ಜೀವ ಪ್ರೀತಿಯ ಕವಿ ಮನಸ್ಸು ತುಂಬಾ ತೂಕವಾದದ್ದು ಎಂದು ಹೇಳುತ್ತಾ, ನಾಗೇಶ್ ನಾಯಕ್‍ರವರು ಹಲವು ಗಂಭೀರತೆಯಿಂದ ಹೊರಬಂದು ಗ್ರಾಮ ಭಾಷೆಯ ಸಂಭಾಷಣೆಯಲ್ಲಿ ಗಜಲ್ ರಚಿಸಿದ್ದೇ ಆದರೆ ಖಂಡಿತ ಕನ್ನಡ ಗಜಲ್ ಉಸ್ತಾದರ ಸಾಲಿನಲ್ಲಿ ಸೇರಬಲ್ಲರು

-ಅಲ್ಲಾಗಿರಿರಾಜ್ ಕನಕಗಿರಿ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು