ರಾಜ್ಯಮಟ್ಟದ ಕಥನ ಕಾವ್ಯ ಸ್ಪರ್ಧೆಗೆ ​​​​​​​ಅರ್ಜಿ ಆಹ್ವಾನ

 



ಕೃಷ್ಣಾಪುರದೊಡ್ಡಿ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ನಿಂದ ರಾಜ್ಯಮಟ್ಟದ ಕಥನ ಕಾವ್ಯ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ಪರ್ಧೆಗೆ ಪ್ರಥಮ ಬಹುಮಾನವಾಗಿ 10,000, ಎರಡನೇ ಬಹುಮಾನ 5,000, ಮೂರನೇ ಬಹುಮಾನ 3,000 ಉಳಿದಂತೆ ತಲಾ 1,000 ದಂತೆ ಐದು ಸಮಾಧಾನಕರ ಬಹುಮಾನ ಹಾಗೂ ಪಾಲ್ಗೊಂಡ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಅರ್ಜಿ ಸಲ್ಲಿಸಲು 2023 ಸೆಪ್ಟೆಂಬರ್ 30ನೇ ಶನಿವಾರ ಕೊನೆಯ ದಿನಾಂಕವಾಗಿದೆ.

ಸ್ಪರ್ಧೆಯ ನಿಯಮಗಳು:

ವೃತ್ತಿಗಾಯಕ ತಂಡಗಳಿಗೆ ಆದ್ಯತೆ ನೀಡಲಾಗುವುದು. ತಂಡದಲ್ಲಿ ಕನಿಷ್ಠ ಮೂರು ಮಂದಿ ಇರಲೇಬೇಕು. ಪಾರಂಪರಿಕ ವಾದ್ಯಪರಿಕರಗಳು ಅಂದರೆ ತಂಬೂರಿ, ತಾಳ, ದುಡಿ, ಗಣೆ, ಕಂಸಾಳೆ, ಕಂಜರ, ಗಗ್ಗರ ಇತ್ಯಾದಿಗಳನ್ನೇ ಬಳಸಬೇಕು. ಉತ್ತರ ಕರ್ನಾಟಕ, ಕರಾವಳಿ, ಬಯಲುಸೀಮೆ ಹೀಗೆ ಆಯಾ ಪ್ರಾದೇಶಿಕ, ಜನಪದ ಮಹಾಕಾವ್ಯ, ಕಥನಕಾವ್ಯಗಳ ಭಾಗಗಳನ್ನು ಪ್ರದರ್ಶಿಸಬೇಕು. ಪ್ರತೀ ತಂಡ ಕನಿಷ್ಠ ಅರ್ಧ ಗಂಟೆ ತಮ್ಮ ಕಲೆಯನ್ನು ಪ್ರದರ್ಶಿಸುವಂತಿರಬೇಕು.

ಹೆಚ್ಚಿನ ವಿವರಗಳಿಗಾಗಿ : ಡಾ. ಎಂ. ಬೈರೇಗೌಡ, ಕಾರ್ಯದರ್ಶಿ ಕೆ.ಎಸ್.ಎಂ. ಟ್ರಸ್ಟ್, 7899 906116, ಚಂದ್ರಮೌಳಿ ಕೆ.ಪಿ. ಸ್ಪರ್ಶ ಸ್ಟುಡಿಯೋಸ್, ಕುಣಿಗಲ್, 9844 080983, ನವೀನ್ ಭೂಮಿ ತಿಪಟೂರು, 9019 591927

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು