ಹೊಸ ಪುಸ್ತಕ ಸೇಪ೯ಡೆ - ಗರಿಬನ ಜೋಳಿಗೆ


ನಾಗೇಶ್ ನಾಯಕರ ಗಜಲ್ ಸಂಕಲನ

ಗರೀಬನ ಜೋಳಿಗೆಯಲ್ಲಿನ ಕನಸುಗಳ ಬಗ್ಗೆ ನಿಮಗೆ ಹೇಳಬೇಕೆಂದರೇ. ಈ ನೆಲದ ಕಟ್ಟ ಕಡೆಯ ಮನುಷ್ಯನಿಗೆ ಕೂಡ ಎಲ್ಲ ಸೌಲಭ್ಯ, ಅವಕಾಶಗಳು ದೊರೆತ ದಿನದಂದೇ ಸಮಸಮಾಜದ ಕನಸು ನನಸಾಗಲು ಸಾಧ್ಯ. ಅಂತಹ ಅಸಮತೆಯ, ಶೋಷಣೆಯ, ಹಸಿವಿನ ಒಡಲಾಳದಿಂದ ಅರಳಿದ ಗಜಲ್‍ಗಳು ಜೋಳಿಗೆಯಲ್ಲಿವೆ. 
ಧರ್ಮ-ದೇವರು, ಬಣ್ಣ-ಸಂಕೇತಗಳು ಈ ನೆಲದಲ್ಲಿ ಹುಟ್ಟು ಹಾಕಿರುವ ಕಂದರಗಳು ಅಗಾಧ. ‘ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ’ ಎಂದು ಕವಿ ಹೇಳಿದ ಹಾಗೆ, ಅನ್ಯೋನ್ಯತೆಯಿಂದ ಬದುಕಿದಾಗಲೇ ಹೊಂದಾಣಿಕೆ ಸಾಧ್ಯ. ಮಾನವೀಯತೆಯನ್ನು ಬೆಸೆಯುವ, ಮನುಷ್ಯತ್ವವನ್ನು ಎಲ್ಲರೆದೆಯಲೂ ಬಿತ್ತುವ ಕನಸುಗಳು ಈ ಗರೀಬನ ಹೃದಯದಲ್ಲಿ ಹೆಪ್ಪುಗಟ್ಟಿವೆ. ಈ ನಾಡಿನ ಮಣ್ಣಿನ ಮಗನ ಕಣ್ಣೀರಿಗೆ ಮಿಡಿಯುವ, ದುಃಖಕ್ಕೆ ಹೆಗಲಾಗುವ ಅಂತಃಕರಣದ ಅನುರಣನವಿದೆ. ಹಾದಿ ತಪ್ಪಿದ ಅಸಂಖ್ಯ ಅಲೆಮಾರಿಗಳಿಗೆ ಕಿರು ಹಣತೆಯ ಬೆಳಕಿದೆ. ತಲೆ ಮೇಲೆ ಕೈ ಹೊತ್ತು ಕೂತವರ ಆತಂಕ, ತಲ್ಲಣಗಳಿಗೆ ಭರವಸೆಯ ಆಶಾಕಿರಣವಿದೆ. 

ಪ್ರೀತಿಸುವ ಎರಡು ಪುಟ್ಟ ಹೃದಯಗಳನ್ನು ಬೆಸೆಯುವ ಒಲವಿನ ಸೇತುವೆಯಿದೆ. ಉಳ್ಳವರ ಸೊಕ್ಕಡಗಿಸುವ ಬದುಕಿನ ಅಂತಿಮ ಸತ್ಯದ ದರ್ಶನವಿದೆ. ಬಿರುಕಾದ ಬಾಂಧವ್ಯಗಳನ್ನು ಬೆಸೆಯುವ ಕೊಂಡಿಯಿದೆ. ಇಂತಹ ಜೀವದ ಒಲವಿನ, ಎದೆಗಳ ನಡುವಿನ ಸೇತುವೆಯನ್ನು ಸೇರಿಸುವ ಗಜಲ್‍ಗಳು ಗರೀಬನ ಜೋಳಿಗೆಯಲ್ಲಿವೆ. 

ಓದಿಕೊಳ್ಳುವ ಸುಖ ನಿಮ್ಮದಾಗಲಿ.


ಪುಸ್ತಕ ಪ್ರತಿ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲಿ ಲಭ್ಯ.

ಸ೦ಪಕ೯ : 8884268702

ಲಿ೦ಕ್:https://www.instamojo.com/scchannappa/4fa5383f07daf55300ab0157ce484716/?ref=store

ಮಿಂಚಿಂಚೆ: pratiprakasana@gmail.com



ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು