ವಿಡಿಯೋ ಕಾನ್ಫರೆನ್ಸ್‍ ಮೂಲಕ ಕಂದೀಲು ಕಾದಂಬರಿಯ ಚರ್ಚೆ - ಬೆಳಗಾವಿ ರೀಡರ್ಸ್‍ ಕಾರ್ನರ್‍ ಅವರ ವಿನೂತನ ಸಭೆ


ಇದು ಅಂತರ್ಜಾಲ ಯುಗ. ಜಗತ್ತನ್ನೇ ಅಂಗೈಯಲ್ಲಿ ತಂದಿಡುವ ಈ ಮಾಯೆ ಇಂದಿನವರ ಜೀವನದಕ್ರಮದ ಒಂದು ಭಾಗವೇ ಆಗಿದೆ. ಎಲ್ಲರೂ ಎಲ್ಲದಕ್ಕೂ ಅಂತರ್ಜಾಲವನ್ನೇ ಆಶ್ರಯಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಕ್ಕೂ ಈ ಅಂತರ್ಜಾಲ ಒಂದಲ್ಲ ಒಂದು ರೀತಿಯಲ್ಲಿ ಬಳಕೆಯಾಗುತ್ತಿದ್ದು ಅದು ಸಾಹಿತ್ಯಕ ವಿನೂತನ ಚಟುವಟಿಕೆಗಳಿಗೂ ನಾಂದಿ ಹಾಡುತ್ತಿರುವುದು ವಿಶೇಷ. ಬೆಳಗಾವಿಯ ರೀಡರ್ಸ್‍ ಕಾರ್ನರ್ ಎಂಬ ಸಾಹಿತ್ಯದ ಓದುಗ ತಂಡವೊಂದು ತಮ್ಮ ಅಭಿರುಚಿಗೆ ತಕ್ಕಂತೆ ಅಂತರ್ಜಾಲದಲ್ಲಿ ವಿಡಿಯೋ ಕಾನ್ಫರೆನ್ಸ್‍ ಮೂಲಕ ಗೂಗಲ್‍ ಪ್ಲೇ ಸ್ಟೋರ್‍ನಲ್ಲಿ ಸಿಗುವ ‘ಜೂಮ್‍’ ಎಂಬ ಅಪ್ಲಿಕೇಶನ್‍ ಸಹಾಯದಿಂದ ಸೋಮು ರೆಡ್ಡಿಯವರ ಬಹು ಚರ್ಚಿತ ಕಾದಂಬರಿ ‘ಕಂದೀಲು’ ಕೃತಿಯ ಕುರಿತು ಚರ್ಚೆಯನ್ನು ನಡೆಸಲಿದ್ದಾರೆ. ದಿನಾಂಕ 7ನೇ ಜೂನ್‍ ಭಾನುವಾರದಂದು ಸಂಜೆ 05 ರಿಂದ 07 ಗಂಟೆಯವರೆಗೆ ನಡೆಯಲಿರುವ ಈ ಚರ್ಚೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಓದುಗರು ಭಾಗವಹಿಸಿಲಿದ್ದಾರೆ. 

ಕಾದಂಬರಿಯ ಒಳಹೂರಣಗಳನ್ನು ಸರಿಯಾಗಿ ಗ್ರಹಿಸಿ ಅಭಿಪ್ರಾಯ ಬರೆದ ಕೆಲ ಓದುಗರನ್ನಷ್ಟೇ ಚರ್ಚೆಗೆ ಆಹ್ವಾನಿಸಲಾಗಿದ್ದು ಖ್ಯಾತ ವಿಮರ್ಶಕರಿಂದ ಪಟ್ಟಿಮಾಡಲಾದ ವಿಷಯಗಳ ಕುರಿತು ಲೇಖಕ ಸೋಮು ರೆಡ್ಡಿಯವರನ್ನೂ ಒಳಗೊಂಡಂತೆ ಚರ್ಚಿಸಲಾಗುವುದೆಂದು ಸಂಯೋಜಕ ಸಿದ್ರಾಮ ಪಾಟೀಲ್‍ ತಿಳಿಸಿದ್ದಾರೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು