ಬಿ. ಶ್ರೀನಿವಾಸರ ಕವಿತೆ - ಪರಕೀಯ


ಆ ಎರಡು ತಾಸುಗಳಲಿ
ಸುರಿಯಲಿದೆ ಬೆವರು 

ಸುರಿದಾಗಲೆಲ್ಲ ನಡಗುತ್ತದೆ ಹಡೆದವ್ವನ ನೆತ್ತರು!

ಕಾಲದ
ಆ ಬಿಡುವಿನಲ್ಲಾದರೂ  ಹಸುಗೂಸಿನ ಮೃದು ತುಟಿಗಳು
ಬತ್ತಿದ  ಮೊಲೆಯನ್ನಾದರೂ ಚೀಪುತ್ತಿದ್ದವು

ಆ ಎರಡು ತಾಸುಗಳಲಿ
ಎಷ್ಟೋ ಕೈಗಳ ರೊಟ್ಟಿಯಾಗುತ್ತಿತ್ತು ಭೂಮಿ,

ಉರಿದು ಬೂದಿಯಾಗುತ್ತಿತ್ತು ಹಸಿವು,
ಅವಳ ಬಿಸಿಯುಸಿರಿಗೆ

ಉಸಿರಿಗಂಟಿದ ಅಕ್ಷರಗಳಿಗೆ,
ಅಕ್ಷರಗಳಿಗೆ ಅಂಟಿದ ಶಬುದಗಳಿಗೆ ನಿಷ್ಠರಾಗಿದ್ದಿದ್ದರೆ....ನಾವು

ಕೊರೊನಾ ಕಾಲದಲ್ಲಿ

ಬೆವರು
ರಾಸ್ಕಲ್ ಎಂದು  ಬೈಸಿಕೊಳ್ಳುತ್ತಿರಲಿಲ್ಲ.
ಊಟದ ತಟ್ಟೆಯ ಅನ್ನವನು,ರಟ್ಟೆಯ ಬಲವನ್ನು ಹೀಗಳೆಯುತ್ತಿರಲಿಲ್ಲ

ಸತ್ಯವು
ಪದೇಪದೇ  ಬದಲಿಸುತ್ತಿರಲಿಲ್ಲ ವಿನ್ಯಾಸ

ಮನುಷ್ಯ
ಆಗುತ್ತಲೇ ಇರಲಿಲ್ಲ ಹೀಗೆ ಪರಕೀಯ!

      
 ಬಿ.ಶ್ರೀನಿವಾಸ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು