ನಾಗೇಶ್ ಜೆ ನಾಯಕರ - ಗಜಲ್


ಭಾವನೆಗಳ ಜೊತೆ ಚೆಲ್ಲಾಟವಾಡುವುದೇ ಹೆಚ್ಚಾಗಿದೆ ಈಗೀಗ
ಹಳೆಯ ಗಾಯಕೆ ಉಪ್ಪು ಸವರುವುದೇ ಹೆಚ್ಚಾಗಿದೆ ಈಗೀಗ

ಬೆಳಕಿನತ್ತ ಕರೆದೊಯ್ಯುವವರು ಬೇಕಿಲ್ಲ ಈಗ ಯಾರಿಗೂ
ಕತ್ತಲೆಯ ಕರೆದು ಬಿಗಿದಪ್ಪುವುದೇ ಹೆಚ್ಚಾಗಿದೆ ಈಗೀಗ

ಮೊಗದ ನಗುವ ನಂಬಿ ಭರವಸೆ ಇಡಬೇಡ ಎಂದಿಗೂ
ನಂಬಿಕೆಯ ಗೋಣು ಮುರಿಯುವುದೇ ಹೆಚ್ಚಾಗಿದೆ  ಈಗೀಗ

ಇದಿರು ಹೊಗಳಿ ಮರೆಗೆ ತೆಗಳುವವರೇ ತುಂಬಿದ್ದಾರೆ
ಬಣ್ಣದ ಮಾತನಾಡಿ ಬೆನ್ನಿಗಿರಿಯುವುದೇ ಹೆಚ್ಚಾಗಿದೆ ಈಗೀಗ

ಒಳ್ಳೆಯವರನ್ನೇ ಕೆಟ್ಟವರೆಂದು ಪ್ರತಿಬಿಂಬಿಸುವ ಕಾಲವಿದು
ಕಿರಾತಕರು ಆರಾಧಕರಾಗಿ ಮೆರೆಯುವುದೇ ಹೆಚ್ಚಾಗಿದೆ ಈಗೀಗ.
- ನಾಗೇಶ್ ಜೆ ನಾಯಕ 


ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು