ಪುಸ್ತಕದ ಮಾತು - ದೀಪಾ ಹೀರೆಗುತ್ತಿ ಅವರ ಕಿತ್ತೊಗೆಯೋಣ ಕಾಣದ ತಡೆಗೋಡೆಗಳನು.

ದೀಪಾ ಹೀರೆಗುತ್ತಿ ಅವರ ಕಿತ್ತೊಗೆಯೋಣ ಕಾಣದ ತಡೆಗೋಡೆಗಳನು ಅಂಕಣ ಬರಹಗಳ ಪುಸ್ತಕದ ಕುರಿತ ಅವರ ಮಾತುಗಳು

ಬಹಳ ಸಲ ನಾವೇಲ್ಲಾ ಒಂದು ರೀತಿಯ ಭ್ರಮೆಯಲ್ಲಿರುತ್ತೆವೆ. ಶಂಕದಿಂದ ಬಂದರೇ ಮಾತ್ರ ತೀರ್ಥಎನ್ನುವಂತೆ ದೊಡ್ಡ ದೊಡ್ಡ ಉಪದೇಶಗಳಿಂದ ಮಾತ್ರ ನಮ್ಮನ್ನು ತಿದ್ದಿಕೊಳ್ಳಬಹುದೆಂದುಕೊಂಡಿರುತ್ತೆವೆ. ನಿಜ, ಹಿಮಾಲಯದಿಂದ ಭವ್ಯತೆಯನ್ನೂ ಕಲಿಯಬಹುದು. ಜೊತೆಗೆ ನಾವೇಷ್ಟು ಕುಬ್ಜರು ಎಂಬ ಆತ್ಮವಿಮಶೆ9ಯನ್ನು ಮಾಡಿಕೊಳ್ಳಬಹುದು. ಆದರೆ ವಾಸ್ತವ ಗೊತ್ತಾ? ಎಷ್ಟೊ ಬಾರಿ ನಮ್ಮ ಬದುಕನ್ನೇ ಬದಲಾಯಿಸುವ ಸಂಗತಿಗಳು ಕ್ಷುಲ್ಲಕ ಎಂದು ನಾವು ಅಂದುಕೊಂಡಿರುವ ಘಟನೆಗಳಿಂದಲೇ ನಡೆಯುತ್ತವೆ. ಪುಟ್ಟಜೇಡವೊಂದು ಸತತ ಪ್ರಯತ್ನದಿಂದ ತನ್ನ ಗುರಿ ಸಾಧಿಸಿ ರಾಜನೊಬ್ಬನಿಗೆ ತನ್ನ ಗುರಿ ಸಾಧಿಸಲು ಸ್ಪೂರ್ತಿ ನೀಡಿದ ಕತೆ ನಮಗೆಲ್ಲಾ ಗೊತ್ತೆ ಇದೆ. ಹತ್ತಿ ಹತ್ತಿ ಮತ್ತೆ ನೆಲಕ್ಕೆ ಬಿದ್ದರೂ ಬಿಡದೇ ಮೇಲೆರುವ ಛಲ ನಾವು ಲೆಕ್ಕಕ್ಕೆ ತೆಗೆದುಕೊಳ್ಳದ ಜೇಡಕ್ಕೆ ಇದೆ ಎಂದರೆ ಮನುಷ್ಯರಾದ ನಾವೇಕೆ ಬದುಕಿನ ಪುಟ್ಟ ಪುಟ್ಟ ಸೋಲುಗಳನ್ನು ಎದುರಿಸಲಾರೆವು? ಆತ್ಮವಿಮರ್ಶೆಗೊಳಪಡಿಸುವ ಪ್ರಶ್ನೆಯೆ!

 


ಪುಸ್ತಕ ಪ್ರತಿ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲಿ ಲಭ್ಯ.

ಸ೦ಪಕ೯ : 8884268702

ಲಿ೦ಕ್: https://www.instamojo.com/scchannappa/2203ca98ec45cc4ce29a23b453bcf6d1/?ref=store

ಮಿಂಚಿಂಚೆ: pratiprakasana@gmail.com



ನಮಗೆ ಅತಿ ಚಿಕ್ಕದೆನಿಸುವ ಅನ್ನದ ಅಗುಳನ್ನು ಎತ್ತಿಕೊಂಡೊಯ್ಯಲು ಹರಸಾಹಸ ಪಡುವ ಅಗುಳಿಗಿಂತ ಪುಟ್ಟದಾದ ಇರುವೆಯನ್ನು ಸೂಕ್ಷ್ಮವಾಗಿ ಗಮನಿಸಿದರೇ ಬದುಕಿನ ಹೋರಾಟದ ಪಾಠ ಕಲಿತೇವು. ಕಷ್ಟದ ಬಿರುಗಾಳಿಗೆ ತಾತ್ಕಾಲಿಕವಾಗಿ ತಲೆ ಬಾಗಿ ಮೇಲೆಳುವ ಹುಲ್ಲಿನೆಳೆಯಿಂದ ಸಂಕಷ್ಟಗಳನ್ನೆದುರಿಸುವ ಪಾಠ. ಮುಟ್ಟಿದೊಡನೆಯೇ ತನ್ನನ್ನು ತಾನು ಮುದುಡಿಕೊಂಡು ಮತ್ತೆ ಹಗೂರಕ್ಕೆ ಅರಳುವ ಮುಟ್ಟಿದರೇ ಮುನಿ ತನ್ನ ಎರಿಳಿತಗಳಿಗೆ ಜಾಣತನದಿಂದ ಸ್ಪಂದಿಸುವುದು ಹೇಗೆಂದು ಹೇಳುತ್ತದೆ. ಗೂಡನ್ನೇ ಕಿತ್ತು ಹಾಕಿದರೂ ಮತ್ತೆ ತನ್ನ ಮಣ್ಣಿನ ಮನೆಯನ್ನು ಶ್ರದ್ದೆಯಿಂದ ನಿರ್ಮಿಸುವ, ಎಂತೆಂತಹ ಇಮಾರತುಗಳನ್ನೇ ಸತತವಾಗಿ ಕೊರೆದು ನೆಲಕಚ್ಚಿಸುವ ಗೆದ್ದಿಲುಗಳು

ನಿರಂತರ ಪರಿಶ್ರಮದಿಂದ ಬಹಳಷ್ಟನ್ನು ಸಾಧಿಸಬಹುದೆಂಬ ಅದ್ಬುತ ಸಂದೇಶಕೊಡುತ್ತವೆ.

 

ಬದುಕಿನಲ್ಲಿ ಗೆಲುವು ಎಂಬುದು ಸೋಲಿನ ಅನುಪಸ್ಥಿತಿ ಎಂಬುದು ನಮ್ಮಲ್ಲಿ ಬಹುತೇಕರಿಗೆ ತಪ್ಪು ಅಭಿಪ್ರಾಯವಿದೆ. ಆದರೇ ವಾಸ್ತವ ಅದಲ್ಲ. ಸತತ ಸೋಲುಗಳ ನಡುವೆಯೂ ಎದೆಗುಂದದೇ ಮುನ್ನಡೆಯುವುದೇ ಯಶಸ್ಸು.

 

ಮರದ ರೆಂಬೆಕೊಂಬೆಗಳನ್ನೆಲ್ಲಾ ತೆಗೆದರೂ ಮುಂಗಾರಿನ ಹನಿಗೆ ತನ್ನ ಗಾಯಗಳನ್ನೆಲ್ಲಾ ಮರೆತು ಮತ್ತೆ ಹಸಿರು ಪುಟಾಣಿ ಎಲೆಯೊಂದು ಯಾವುದೋ ಒಂದು ಮೋಟು ರೆಂಬೆಯಿಂದ ಹಗೂರಕ್ಕೆ ತಲೆಯೆತ್ತಿ ನೋಡುತ್ತದೆ! ನೋಡನೋಡುತ್ತಲೇ ಸೂರ್ಯನ ಕಿರಣಗಳನ್ನು ಚುಂಬಿಸಿ ತನ್ನ ಪತ್ರಹರಿತ್ತಿನ ಪುಟ್ಟ ಅಡಿಗೆಮನೆಯಲ್ಲಿ ಆಹಾರ ತಯಾರಿಸಿ ಮತ್ತೆ ಇಡೀ ಮರವನ್ನು ಪೊರೆಯುತ್ತದೆ. ಈ ಜೀವನಪ್ರೀತಿ ಒಂದಿದ್ದುಬಿಟ್ಟರೆ ಅದ್ಭುತಗಳನ್ನು ಸಾಧಿಸಬಹುದು.

 

ಯುವಜನರಲ್ಲಿ ಈ ಜೀವನಪ್ರೀತಿಯನ್ನು ತುಂಬುವ ಉದ್ದೇಶದಿಂದ ಪ್ರಕಟವಾದ ನನ್ನ ಕಳೆದೆರೆಡು ಪುಸ್ತಕಗಳನ್ನು ನೀವೇಲ್ಲಾ ಪ್ರೀತಿಯಿಂದ ಕಂಡಿದ್ದಿರಿ. ಟಾಪ್ ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಹಲವು ಸಲ ಜಾಗವನ್ನೂ ಕೊಟ್ಟಿದ್ದಿರಿ. ಪತ್ರಗಳ ಮೂಲಕ ನನ್ನನ್ನು ಪ್ರೋತ್ಸಾಹಿಸಿದ್ದಿರಿ. ನನ್ನ ಪುಸ್ತಕಗಳನ್ನು ಬಹುಮಾನವಾಗಿ, ನೆನಪಿನ ಕಾಣಿಕೆಯಾಗಿ ಕೊಟ್ಟು ಗೌರವಿಸಿದ್ದಿರಿ. ನಿಮಗೆಲ್ಲಾ ನನ್ನ ಕೃತಜ್ಞತಾಪೂರ್ವಕ ವಂದನೆಗಳು.

 

ಈ ಪುಸ್ತಕದಲ್ಲಿನ ಪುಟ್ಟ ಲೇಖನಗಳು ನಮ್ಮ ಕೊಪ್ಪದ ಸ್ಥಳಿಯ ಪತ್ರಿಕೆ ರೈತ ಸಂಗಾತಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರಕಟವಾಗಿದ್ದವು. ಸಣ್ಣ ಸಣ್ಣ ಬರಹಗಳ ಬೇಗ ಓದಿಸಿಕೊಳ್ಳುತ್ತವೆ. ಒಳ್ಳೆಯ ಪರಿಣಾಮ ಬೀರುತ್ತವೆ. ಇಲ್ಲಿನ ಬಹುತೇಕ ಲೇಖನಗಳಲ್ಲಿ ನಾನು ಚಿಕ್ಕ ಚಿಕ್ಕ ಕತೆಗಳನ್ನು ಬಳಸಿಕೊಂಡಿದ್ದೆನೆ. ಇವೇಲ್ಲಾ ಅಂತರ್ಜಾಲದಲ್ಲೋ ಅಥವಾ ಪುಸ್ತಕಗಳಲ್ಲೋ ನನಗೆ ಸಿಕ್ಕಿದ್ದವು. ಈ ಕತೆಗಳ ಅಜ್ಞಾತ ಲೇಖಕರಿಗೆ, ರೈತ ಸಂಗಾತಿ ಪತ್ರಿಕೆಯ ಸಂಪಾದಕರಿಗೆ, 2018 ರಲ್ಲಿ ಫಿನಿಕ್ಸ್'ನ ಯಶಸ್ವಿ ಪ್ರಕಟಣೆಯ ನಂತರ 2019 ರಲ್ಲೂ ನಿಮ್ಮಿದೊಂದು ಪುಸ್ತಕ ಬರಲೇಬೇಕು ಎಂದು ಒತ್ತಾಯಿಸಿ ಪ್ರಕಟಿಸುತ್ತಿರುವ ತಾರಾನಾಥ ಭದ್ರಾವತಿಯವರಿಗೆ, ಮುಖಪುಟ ವಿನ್ಯಾಸ ಮಾಡಿದ ಗೋದಾವರಿಯವರಿಗೆ, ನನ್ನ ಕುಟುಂಬದ ಸದ್ಯಸ್ಯರಿಗೆ, ಸ್ನೇಹಿತ ಬಳಗಕ್ಕೆ ಹಾಗೂ ಓದುತ್ತಿರುವ ನಿಮಗೆ ಎಲ್ಲರಿಗೂ ಧನ್ಯವಾದಗಳು ಮತ್ತು ಪ್ರೀತಿ.

 

ಅಂದ ಹಾಗೆ ಇದು ಮಹಾತ್ಮಗಾಂಧಿಜಿಯವರ ನೂರೈವತ್ತನೇ ಜನ್ಮವರ್ಷಾಚರಣೆಯ ಸಂದರ್ಭ. ನನ್ನ ಪುಟ್ಟ ಕೃತಿ ಅವರ ನೆನಪಿಗೆ ಸಮರ್ಪಿತ.

ದೀಪಾ ಹೀರೆಗುತ್ತಿ


 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು