ಮಾರುತಿ ತಳವಾರರ ಪದ್ಯ - ನನ್ನ ಜನ



ನನ್ನ ಜನ
ತಲೆಮೇಲೆ ಕಾಲಿಟ್ಟರೂ ಮತ್ತೇ ಮತ್ತೇ ಚಿಗುರುವಂಗ,
ಕರಕಿಯ ಕುಡಿಹಂಗ,
ಮೊಗ್ಗು ಹಿಗ್ಗಿ ಅರಳಿ ಕಂಪಿಸಿದರೂ
ಬಯಸದ ಬೇಲಿ ಹೂವಂಗ,
ಮಳೆ ಚಳಿ ಗುಡುಗು
ಸಿಡಿಲಿಗೆ ಜಗ್ಗದ ಕಗ್ಗಲ್ಲಿನಾಂಗ,
          ತಾಸುಟ್ಟರೂ ಸುತ್ತss ಬೆಳಕು
ನೀಡುವ ಜ್ಯೋತಿ ಇದ್ದಾಂಗ,
ತಾಕಟ್ಟಿದ ಗೂಡು ದಕ್ಕದಾದಾಗ
ಪರಿತಪಿಸುವ ಜೇನು ನೋಣದಂಗ,
ಕಸಕಡ್ಡಿ ಹೊತ್ತೊಯ್ದು ಊರ
ಹೊಲಸ ತೊಳೆವ ಪವಿತ್ರ ನದಿಹಂಗ,
ಶಿಕ್ಷಣ ಸಂಘಟನೆ ಹೋರಾಟ 
ಇನ್ನೂ ಅರಿಯದ ಅದೆಷ್ಟೋ ಮನ 
ನನ್ನ ಜನ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು