ಥೇಟ್ ಕಾಳಿಂಗನೆಂಬೋ ಘಟಸಪ೯...

ಇಂದು ಊರಾಚೆ ಗುಡಿಸಲಲ್ಲಿ
ಗೂಡಾಗಿದ್ದ, ಗುಂಪೆ ಮಲ್ಲಪ್ಪನೆಂಬೋ ಥೇಟರ್
ಬಂದೊಮ್ಮೇ ಥೇಟ್ ಕಾಳಿಂಗನೇಬೋ ಘಟಸಪ೯
ಬೋಗ೯ರೆದು ಹರಿಯುತ್ತದ್ದರೇ
ಊರೂರೇ ಹೌಹಾರಿ ಕುಣಿಯುತ್ತತ್ತು
ಅರೇ.....  ರಾಜಕುಮಾರ
ಶಿಳ್ಳೆ, ಸದ್ದು, ಗದ್ದಲಗಳ ಗೂಡಾಗಿ
ಹಗಲ್ಲೆಲ್ಲಾ ಕಳೆಕಿತ್ತು, ಮಾಗಿಮಾಡಿ
ಕುಣಿಕುಣಿದು ಒಕ್ಕಲು ಮಾಡಿದವರ
ಬೆವರ ಕಮಟು ವಾಸನೆ ಎಲ್ಲರ ಮೀರಿ
ರಾಜಕುಮಾರನಿಗೂ ಮುಟ್ಟುತ್ತಿತ್ತು
ನಾಟಕಿಯರು ನಟಿಸುವಾಗಲೇ
ನಾಚಿದ್ದು ನಮ್ಮವ್ವ ಮಲ್ಲಿ
ಕೆಂಪಿಗರ ಕೆಂಪನ್ನ ಕಂಡು
ಆ ಅಜಾನುಬಾಹು ಕಾಳಿಂಗನೊಮ್ಮೆ
ನಾಗರ,ಮಿಡಿನಾಗರವಾಗಿ ಪೊರೆಬಿಟ್ಟಾಗ
ಕಾಲುಮುರಿದ ಟಮ್ ಟಮ್, ಟ್ರಕ್ಕುಗಳಾದೀ ಓಡುತ್ತಿದ್ದವು
ಮುಂದುರ ಸಪ೯ದ ಸುವಾಸನೆಯೆಡೆಗೆ...
ಕೆಂಪಣ್ಣನ ಮನೆ ಮಡದಿ
ಹರಕು ಮುರಕ ಕೆರವನ್ನೆಲ್ಲಾ ತಂದೊಗೆಯುತ್ತದ್ದಾರೆ
ನಾಟಕವಾಡಿ ಉಂಡವರು
ಉಂಡ ಜಾಗದಲ್ಲೇ ಹೇತಿದ್ದಾರೆ
ಥೇಟ್ ನಾಗಿಣಿಯಂತವಳ್ಳೊಬ್ಬಳು ಸಿಕ್ಕಿ
ಹಾರಾಡಿ, ಹರಿದಾಡಿ ಹುಟ್ಟಿದ್ದ ಮರಿಕಾಳಿಂಗ
ಕೆಂಪುಗಣ್ಣಲ್ಲೇ ಸ್ಕೆಚ್ಚು ಹಾಕಿ ಹೇಳುತ್ತಿದ್ದಾನೆ ಒಡೆದುಬಿಡಿ
ಇಂದೋ...
ಹರಿತಾಳ ಹಾಲಜ್ಜ, ಕೀಲೆಣ್ಣೆ ಕುಮ್ಮನ
ಗರಿಗರಿ, ಗರಿಗೆದರಿಕೊಳ್ಳುತ್ತಿದ್ದಾರೆ
ಒತ್ತಟ್ಟು ಕುಣಿಯುತ್ತಿದ್ದಾರೆ
ಕೆಂಬೂತ, ಕೆಂಧೂಳ ಕೆದರಿ ಹಾಕುವ ಬ್ರೇಕ್
ಸಿಕ್ಕವರ ಕೈಯಲ್ಲಿ ಕಾಳಿಂಗ
ಮೂರು ಬಿಟ್ಟವರೋ ತಪ್ಪು
ಊರು ಬಿಡಬೇಕೆಂದೆನಿಸಿ ಓಡಿ,ಓಡಿ
ಗುಡಿಸಲ ಹೊಕ್ಕ
ಇಂದು ಊರಾಚೆ ಗುಡಿಸಲಿನ
ಗುಂಪೇ ಮಲ್ಲಪ್ಪ
ಒಂದೊಮ್ಮೆ ಥೇಟ್ ಕಾಳಿಂಗನೆಂಬೋ ಘಟಸಪ೯

ಶಿವಕುಮಾರ ಚನ್ನಪ್ಪನವರ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು